ಶಿಂಗಲ್ಸ್ (ಸರ್ಪಸುತ್ತು) ಮತ್ತು ಮಧುಮೇಹ: ಸಂಪರ್ಕ, ಪರಿಣಾಮ ಮತ್ತು ತಡೆಗಟ್ಟುವಿಕೆ

ಕಾಲ್ಪನಿಕ ಚಿತ್ರ, ಉದಾಹರಣೆಯ ಉದ್ದೇಶಗಳಿಗಾಗಿ ಮಾತ್ರ
ಮಧುಮೇಹದೊಂದಿಗೆ ಬದುಕುವುದು ಸವಾಲಿನ ಕಾರ್ಯವೇ ಆಗಿದ್ದು, ಇದು ದೈನಂದಿನ ಜೀವನದ ವಿವಿಧ ಅಂಶಗಳ ಮೇಲೆ ಪರಿಣಾಮ ಬೀರುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟಗಳನ್ನು ನಿರ್ವಹಿಸುವುದು, ಸಂಕೀರ್ಣವಾದ ಔಷಧಿ ನಿಯಮಾವಳಿ ಮತ್ತು ಆಹಾರದ ನಿರ್ಬಂಧಗಳು ಮಧುಮೇಹ ಹೊಂದಿರುವ ಜನರು ಎದುರಿಸುವ ಕೆಲವು ಅಡೆತಡೆಗಳಾಗಿವೆ.1
ಮಧುಮೇಹದ ನಿರ್ವಹಣೆಯು ಸವಾಲಿನ ಕೆಲಸವಾಗಬಹುದಾಗಿದ್ದರೂ, ಅದರ ಪರಿಣಾಮದ ಬಗ್ಗೆ ಅಥವಾ ಅದು ಇತರ ರೋಗಗಳನ್ನು ಹೇಗೆ ಆಕರ್ಷಿಸಬಹುದು ಎಂಬ ಕುರಿತು ತಿಳಿದುಕೊಳ್ಳುವುದನ್ನು ನೀವು ತಪ್ಪಿಸಬಾರದು.1
ಮಧುಮೇಹವು ಸಾಮಾನ್ಯವಾಗಿ ಶಿಂಗಲ್ಸ್ (ಸರ್ಪಸುತ್ತು) ಎಂದು ಕರೆಯಲ್ಪಡುವ ಹರ್ಪಿಸ್ ಜೋಸ್ಟರ್ ಅನ್ನು ಬೆಳೆಸಿಕೊಳ್ಳುವ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೆಚ್ಚು ಹೆಚ್ಚು ಪುರಾವೆಗಳು ತೋರಿಸುತ್ತವೆ.2
ಎರಡು ರೋಗಸ್ಥಿತಿಗಳ ನಡುವಿನ ಸಂಬಂಧ ಮತ್ತು ಅದರ ಪರಿಣಾಮಗಳನ್ನು ಅನ್ವೇಷಿಸೋಣ.
ಮಧುಮೇಹ ಎಂದರೇನು?
ಮಧುಮೇಹ ಎನ್ನುವುದು ದೀರ್ಘಕಾಲದ ಆರೋಗ್ಯ ಸ್ಥಿತಿಯಾಗಿದ್ದು, ಇದು ನಿಮ್ಮ ದೇಹವು ಆಹಾರವನ್ನು ಶಕ್ತಿಯಾಗಿ ಹೇಗೆ ಪ್ರಕ್ರಿಯಗೊಳಿಸುತ್ತದೆ ಎಂಬುದರ ಮೇಲೆ ಪರಿಣಾಮ ಬೀರುತ್ತದೆ. ಇದು ಸಾಕಷ್ಟು ಇನ್ಸುಲಿನ್ ಉತ್ಪಾದನೆಯಿಲ್ಲದ ಅಥವಾ ಅದರ ಪರಿಣಾಮಕಾರಿಯಲ್ಲದ ಬಳಕೆಯಿಂದಾಗಿ ರಕ್ತದಲ್ಲಿನ ಸಕ್ಕರೆಯ ಹೆಚ್ಚಾಗುವ ಗುಣಲಕ್ಷಣವನ್ನು ಹೊಂದಿದೆ.3,4
ಮಧುಮೇಹದಲ್ಲಿ 2 ವಿಧಗಳಿವೆ, ಟೈಪ್ 1 (ಇನ್ಸುಲಿನ್ ಕೊರತೆ) ಮತ್ತು ಟೈಪ್ 2 (ಇನ್ಸುಲಿನ್ ಪ್ರತಿರೋಧ).4
ಟೈಪ್ 1 ಮಧುಮೇಹ
ದೇಹದ ರಕ್ಷಣಾ ವ್ಯವಸ್ಥೆಯು ತಪ್ಪಾಗಿ ಸ್ವತಃ ದಾಳಿ ಮಾಡಿಕೊಂಡಾಗ ಇದು ಸಂಭವಿಸುತ್ತದೆ. ಇದನ್ನು ನಿಯಂತ್ರಿಸದಿದ್ದರೆ ಹೃದ್ರೋಗ, ಮೂತ್ರಪಿಂಡದ ತೊಂದರೆಗಳು ಮತ್ತು ಕಣ್ಣಿನ ಸಮಸ್ಯೆಗಳಂತಹ ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು. 4
ಟೈಪ್ 2 ಮಧುಮೇಹ
ಈ ಪರಿಸ್ಥಿತಿಯಲ್ಲಿ, ದೇಹಕ್ಕೆ ಇನ್ಸುಲಿನ್ ಅನ್ನು ಸರಿಯಾಗಿ ಬಳಸಲು ಮತ್ತು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಲು ತೊಂದರೆಯಾಗುತ್ತದೆ. ಮಧುಮೇಹ ಹೊಂದಿರುವ ಅನೇಕ ಜನರು ಟೈಪ್ 2 ಹೊಂದಿರುತ್ತಾರೆ. ಇದು ಸಾಮಾನ್ಯವಾಗಿ ನಿಧಾನವಾಗಿ ಆರಂಭಗೊಳ್ಳುತ್ತದೆ ಮತ್ತು ಹೆಚ್ಚಾಗಿ ವಯಸ್ಕರಲ್ಲಿ ಕಂಡುಬರುತ್ತದೆ, ಆದರೆ ಈಗ ಮಕ್ಕಳು, ಹದಿಹರೆಯದವರು ಮತ್ತು ಯುವಕರು ಸಹ ಇದರಿಂದ ಬಳಲಬಹುದು. 4

ಕಾಲ್ಪನಿಕ ಚಿತ್ರ, ಉದಾಹರಣೆಯ ಉದ್ದೇಶಗಳಿಗಾಗಿ ಮಾತ್ರ
ರೋಗನಿರೋಧಕ ವ್ಯವಸ್ಥೆಯ ಮೇಲೆ ಮಧುಮೇಹದ ಪರಿಣಾಮಗಳು
ಮಧುಮೇಹದಲ್ಲಿ ಅಧಿಕ ರಕ್ತದ ಸಕ್ಕರೆ ಅಥವಾ ಹೈಪರ್‌ಗ್ಲೈಸೇಮಿಯಾವು ರೋಗನಿರೋಧಕ ಪ್ರತಿಕ್ರಿಯೆಯ ಅಪಸಾಮಾನ್ಯ ಕ್ರಿಯೆಗೆ ಕಾರಣವಾಗುತ್ತದೆ ಎಂಬುದಾಗಿ ಭಾವಿಸಲಾಗಿದೆ, ಇದು ಮಧುಮೇಹ ಪ್ರಯೋಗಾರ್ಥಿಗಳಲ್ಲಿ ಆಕ್ರಮಣಕಾರಿ ರೋಗಕಾರಕಗಳ ಹರಡುವಿಕೆಯನ್ನು ನಿಯಂತ್ರಿಸಲು ವಿಫಲವಾಗುತ್ತದೆ.5
ಇದರ ಅರ್ಥವು ಒಬ್ಬ ವ್ಯಕ್ತಿಯು ಮಧುಮೇಹವನ್ನು ಹೊಂದಿರುವಾಗ ಮತ್ತು ಅವರ ರಕ್ತದಲ್ಲಿನ ಸಕ್ಕರೆ ಮಟ್ಟವು ತೀರಾ ಹೆಚ್ಚಿರುವಾಗ (ಹೈಪರ್‌ಗ್ಲೈಸೇಮಿಯಾ), ಅದು ಅವರ ರೋಗನಿರೋಧಕ ಶಕ್ತಿಯು ಸರಿಯಾಗಿ ಕಾರ್ಯನಿರ್ವಹಿಸದಂತೆ ಮಾಡಬಹುದು.
ಪರಿಣಾಮವಾಗಿ, ಮಧುಮೇಹ ಹೊಂದಿರುವ ವ್ಯಕ್ತಿಗಳು ಸೋಂಕುಗಳನ್ನು ಪಡೆಯುವ ಹೆಚ್ಚಿನ ಸಾಧ್ಯತೆ ಇರುತ್ತದೆ. 5
ಮಧುಮೇಹವು ನೀವು ಶಿಂಗಲ್ಸ್ (ಸರ್ಪಸುತ್ತನ್ನು) ಪಡೆಯುವ ಅಪಾಯವನ್ನು ಹೇಗೆ ಹೆಚ್ಚಿಸುತ್ತದೆ?
ಮಧುಮೇಹವು ದೀರ್ಘಾವಧಿಯ ಸ್ಥಿತಿಯಾಗಿದ್ದು, ರಕ್ತನಾಳಗಳಿಗೆ ಹಾನಿಯಾಗುವ ಕಾರಣದಿಂದ ಮೆದುಳು, ಮೂತ್ರಪಿಂಡಗಳು, ಹೃದಯ ಮತ್ತು ಕಣ್ಣುಗಳಂತಹ ಅಂಗಗಳ ಮೇಲೆ ಪರಿಣಾಮ ಬೀರುವ ವಿವಿಧ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಇದು ಸೋಂಕುಗಳಿಗೆ ವ್ಯಕ್ತಿಗಳು ಹೆಚ್ಚು ಗುರಿಯಾಗುವಂತೆ ಸಹ ಮಾಡುತ್ತದೆ.5
ದುರ್ಬಲ ರೋಗನಿರೋಧಕ ವ್ಯವಸ್ಥೆಯು ಶಿಂಗಲ್ಸ್ (ಸರ್ಪಸುತ್ತಿನ) ಅಪಾಯವನ್ನು ಹೆಚ್ಚಿಸುವುದರಿಂದ, ಮಧುಮೇಹ ಹೊಂದಿರುವ ವ್ಯಕ್ತಿಯು ತುತ್ತಾಗುವ ಹೆಚ್ಚಿನ ಸಾಧ್ಯತೆ ಇರುತ್ತದೆ. ಮಧುಮೇಹವು ಹರ್ಪಿಸ್ ಜೋಸ್ಟರ್ ಅನ್ನು ಬೆಳೆಸಿಕೊಳ್ಳುವ ಅಪಾಯವನ್ನು 40% ಹೆಚ್ಚಿಸುತ್ತದೆ. 6,7
ಮಧುಮೇಹಿಗಳ ಮೇಲೆ ಶಿಂಗಲ್ಸ್ (ಸರ್ಪಸುತ್ತಿನ) ಪರಿಣಾಮ
ಮಧುಮೇಹ ಹೊಂದಿರುವ ವ್ಯಕ್ತಿಗಳಿಗೆ ಹರ್ಪಿಸ್ ಜೋಸ್ಟರ್ ಗಮನಾರ್ಹ ಸವಾಲುಗಳನ್ನು ಒಡ್ಡಬಹುದು.2
- ಗ್ಲೈಸೆಮಿಕ್ ನಿಯಂತ್ರಣದ ಮೇಲೆ ಪರಿಣಾಮ: ಮಧುಮೇಹ ರೋಗಿಗಳಲ್ಲಿ ಗ್ಲೈಸೆಮಿಕ್ ನಿಯಂತ್ರಣವನ್ನು (ಸೂಕ್ತವಾದ ಸೀರಮ್ ಗ್ಲೂಕೋಸ್ ಸಾಂದ್ರತೆ) ಹರ್ಪಿಸ್ ಜೋಸ್ಟರ್ ಹದಗೆಡಿಸುತ್ತದೆ.8 ಒಂದು ಅಧ್ಯಯನದಲ್ಲಿ, ಚೆನ್ನಾಗಿ ನಿಯಂತ್ರಣವಿದ್ದ ಮಧುಮೇಹ ರೋಗಿಗಳಲ್ಲಿ ಸುಮಾರು 24% ಜನರು ಹರ್ಪಿಸ್ ಜೋಸ್ಟರ್ ಸೋಂಕನ್ನು ಪಡೆದುಕೊಂಡ ನಂತರ ಹೆಚ್‌ಬಿಎ1ಸಿ (ಸರಾಸರಿ ರಕ್ತದ ಸಕ್ಕರೆ ಅಥವಾ ಗ್ಲೂಕೋಸ್ ಮಟ್ಟವನ್ನು ಅಳೆಯುವ ರಕ್ತದ ಪರೀಕ್ಷೆ) ನಿಂದ ಅಳೆಯಲಾದ ಗ್ಲೈಸೆಮಿಕ್ ನಿಯಂತ್ರಣದಲ್ಲಿ ಇಳಿತವನ್ನು ಅನುಭವಿಸಿದರು.8

ಕಾಲ್ಪನಿಕ ಚಿತ್ರ, ಉದಾಹರಣೆಯ ಉದ್ದೇಶಗಳಿಗಾಗಿ ಮಾತ್ರ
- ತೊಡಕುಗಳು ಮತ್ತು ತೀವ್ರತೆ: ಮಧುಮೇಹವು ರೋಗನಿರೋಧಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಕಾರಣದಿಂದ 5, ಶಿಂಗಲ್ಸ್ (ಸರ್ಪಸುತ್ತಿನ) ರೋಗಲಕ್ಷಣಗಳು ತೀವ್ರವಾಗಿರಬಹುದು.2
ಮಧುಮೇಹ ನಿರ್ವಹಣೆಯಲ್ಲಿ ಹಸ್ತಕ್ಷೇಪ: ಶಿಂಗಲ್ಸ್ (ಸರ್ಪಸುತ್ತಿನ) ನಂತರ ಮಧುಮೇಹ ರೋಗಿಗಳು ತಮ್ಮ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಕಷ್ಟಪಡಬಹುದು. ಹೆಚ್ಚುವರಿಯಾಗಿ, ಈ ಸಮಯದಲ್ಲಿ ಅವರು ಇತರ ಆರೋಗ್ಯ ಸಮಸ್ಯೆಗಳಿಗಾಗಿ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಶಿಂಗಲ್ಸ್ (ಸರ್ಪಸುತ್ತು) (ಹರ್ಪಿಸ್ ಜೋಸ್ಟರ್) ಎಂದರೇನು
ಹರ್ಪಿಸ್ ಜೋಸ್ಟರ್ ಎಂಬುದಾಗಿಯೂ ಕರೆಯಲ್ಪಡುವ ಶಿಂಗಲ್ಸ್ (ಸರ್ಪಸುತ್ತು) ಎನ್ನುವುದು ಒಂದು ಸೋಂಕು ಆಗಿದ್ದು, ಇದು ಗುಳ್ಳೆಗಳೊಂದಿಗೆ ನೋವುದಾಯಕ ಚರ್ಮದ ದದ್ದನ್ನು ಉಂಟುಮಾಡುತ್ತದೆ. ಸಿಡುಬಿಗೂ ಕಾರಣವಾಗುವ ವೈರಸ್ ಆದ ವೆರಿಸೆಲ್ಲಾ-ಜೋಸ್ಟರ್ ಶಿಂಗಲ್ಸ್ (ಸರ್ಪಸುತ್ತಿಗೆ) ಕಾರಣವಾಗುತ್ತದೆ. ಒಬ್ಬ ವ್ಯಕ್ತಿಯು ಸಿಡುಬನ್ನು ಪಡೆದ ನಂತರ, ವೈರಸ್ ಅವರ ದೇಹದಲ್ಲಿ ಸುಪ್ತವಾಗಿರುತ್ತದೆ ಮತ್ತು ನಂತರದ ಜೀವನದಲ್ಲಿ ಮರುಸಕ್ರಿಯಗೊಳ್ಳಬಹುದು, ಇದು ಶಿಂಗಲ್ಸ್ (ಸರ್ಪಸುತ್ತಿಗೆ) ಕಾರಣವಾಗುತ್ತದೆ.9
ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆಯು ಶಿಂಗಲ್ಸ್ (ಸರ್ಪಸುತ್ತಿನ) ಅಪಾಯವನ್ನು ಹೆಚ್ಚಿಸುತ್ತದೆ ಮತ್ತು ಆದ್ದರಿಂದ ವಯಸ್ಸಾದವರಲ್ಲಿ ಹೆಚ್ಚು ಸಾಮಾನ್ಯವಾಗಿರುತ್ತದೆ ಮತ್ತು ವಯಸ್ಸಾದಂತೆ ಈ ಸ್ಥಿತಿಯನ್ನು ಬೆಳೆಸಿಕೊಳ್ಳುವ ಅಪಾಯವು ಹೆಚ್ಚಾಗುತ್ತದೆ.10
ಭಾರತೀಯ ಪ್ರಯೋಗಾರ್ಥಿಗಳಲ್ಲಿ ಮಾಡಲಾದ ಸೆರೋಪ್ರೆವೆಲೆನ್ಸ್ ಅಧ್ಯಯನವು 50 ವರ್ಷ ವಯಸ್ಸಿನ ಹೊತ್ತಿಗೆ, 90% ಕ್ಕಿಂತ ಹೆಚ್ಚು ಜನರು ಅವರ ದೇಹದಲ್ಲಿ ವೆರಿಸೆಲ್ಲಾ-ಜೋಸ್ಟರ್ ವೈರಸ್ ಅನ್ನು ಹೊಂದಿದ್ದು, ಇದು ಅವರು ಅವರು ಶಿಂಗಲ್ಸ್ (ಸರ್ಪಸುತ್ತಿಗೆ) ಗುರಿಯಾಗುವಂತೆ ಮಾಡಿತು.11,12

ಕಾಲ್ಪನಿಕ ಚಿತ್ರ, ಉದಾಹರಣೆಯ ಉದ್ದೇಶಗಳಿಗಾಗಿ ಮಾತ್ರ
ಶಿಂಗಲ್ಸ್ (ಸರ್ಪಸುತ್ತಿನ) ರೋಗಲಕ್ಷಣಗಳು
ದದ್ದು ಕಾಣಿಸಿಕೊಳ್ಳುವ ಮೊದಲು, ವ್ಯಕ್ತಿಗಳು ಪೀಡಿತ ಪ್ರದೇಶದಲ್ಲಿ ನೋವು, ತುರಿಕೆ ಅಥವಾ ಜುಮ್ಮೆನ್ನುವಿಕೆಯನ್ನು ಅನುಭವಿಸಬಹುದು, ಇದು ಆಗಾಗ್ಗೆ ಹಲವು ದಿನ ಮುಂಚಿತವಾಗಿ ಸಂಭವಿಸುತ್ತದೆ. ದದ್ದು ಹೊರಹೊಮ್ಮುವ ಮೊದಲು ಕೆಲವು ಜನರಿಗೆ ಜ್ವರ ಸಹ ಬರಬಹುದು.13
ಸಾಮಾನ್ಯ ಲಕ್ಷಣಗಳು:
ಸಾಮಾನ್ಯವಾಗಿ ನೋವು ಮತ್ತು ತುರಿಕೆಗಳನ್ನು ಹೊಂದಿರುವ ದದ್ದು, ಹೊಪ್ಪಳೆಯನ್ನು ಒಳಗೊಂಡಿರುತ್ತದೆ, ಇದು ಸಾಮಾನ್ಯವಾಗಿ 7 ರಿಂದ 10 ದಿನಗಳ ಅವಧಿಯಲ್ಲಿ ಗುಳ್ಳೆಗಳ ಬೆಳವಣಿಗೆಗೆ ಕಾರಣವಾಗುತ್ತದೆ, ಅಂತಿಮವಾಗಿ 2 ರಿಂದ 4 ವಾರಗಳ ಅವಧಿಯಲ್ಲಿ ಸಂಪೂರ್ಣವಾಗಿ ಪರಿಹಾರವಾಗುತ್ತದೆ.13
ದದ್ದು ಸಾಮಾನ್ಯವಾಗಿ ದೇಹದ ಎಡ ಅಥವಾ ಬಲಭಾಗದಲ್ಲಿ ಒಂದೇ ಪಟ್ಟಿಯಲ್ಲಿ ಕಂಡುಬರುತ್ತದೆ.9
ಶಿಂಗಲ್ಸ್ (ಸರ್ಪಸುತ್ತು) ದದ್ದು ಮುಖದ ಒಂದು ಬದಿಯಲ್ಲಿ ಸಂಭವಿಸಬಹುದು, ಇದು ಕಣ್ಣಿನ ಮೇಲೆ ಪರಿಣಾಮ ಬೀರಬಹುದು ಮತ್ತು ದೃಷ್ಟಿಯ ನಷ್ಟಕ್ಕೆ ಕಾರಣವಾಗಬಹುದು.13
ಇತರ ರೋಗಲಕ್ಷಣಗಳು ಇವುಗಳನ್ನು ಒಳಗೊಂಡಿರಬಹುದು13:
- ತಲೆನೋವು
- ಶೀತ
- ಹೊಟ್ಟೆ ನೋವು

ಕಾಲ್ಪನಿಕ ಚಿತ್ರ, ಉದಾಹರಣೆಯ ಉದ್ದೇಶಗಳಿಗಾಗಿ ಮಾತ್ರ
ಶಿಂಗಲ್ಸ್ (ಸರ್ಪಸುತ್ತು) ತಡೆಗಟ್ಟುವಿಕೆ
ಶಿಂಗಲ್ಸ್ (ಸರ್ಪಸುತ್ತನ್ನು) ತಡೆಗಟ್ಟಲು ಲಸಿಕೆಯು ಸಹಾಯ ಮಾಡಬಹುದು.14 50 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವಯಸ್ಕರಿಗೆ ಶಿಂಗಲ್ಸ್ (ಸರ್ಪಸುತ್ತಿನ) ಲಸಿಕೆಯನ್ನು ಶಿಫಾರಸು ಮಾಡಲಾಗಿದೆ. 15,16
References
- 10 Tips for coping with diabetes distress [Internet]. Cdc.gov. 2022 [cited 2023 Sep 11]. [Accessed 2023 Sep 11] Available at: https://www.cdc.gov/diabetes/managing/diabetes-distress/ten-tips-coping-diabetesdistress.html
- Papagianni M, Metallidis S, Tziomalos K. Herpes Zoster and Diabetes Mellitus: A Review. Diabetes Ther. 2018 Apr;9(2):545-550.
- CDC. What is diabetes? [Internet]. Centers for Disease Control and Prevention. 2023 [cited 2023 Sep 11]. [Accessed 2023 Sep 11] Available at: https://www.cdc.gov/diabetes/basics/diabetes.html
- Berbudi A, Rahmadika N, Tjahjadi AI, Ruslami R. Type 2 Diabetes and its Impact on the Immune System. Curr Diabetes Rev. 2020;16(5):442-449.
- Batram M, Witte J, Schwarz M, Hain J, et al. Burden of Herpes Zoster in Adult Patients with Underlying Conditions: Analysis of German Claims Data, 2007-2018. Dermatol Ther (Heidelb). 2021 Jun;11(3):1009-1026.
- Marra F et al. Open Forum Infect Dis. 2020;7:1-8.
- Huang CT, Lee CY, Sung HY, et al. Association Between Diabetes Mellitus and the Risk of Herpes Zoster: A Systematic Review and Meta-analysis. J Clin Endocrinol Metab. 2022 Jan 18;107(2):586-597.
- Muñoz-Quiles C, López-Lacort M, Ampudia-Blasco FJ, Díez-Domingo J. Risk and impact of herpes zoster on patients with diabetes: A population-based study, 2009–2014. Hum Vaccin Immunother [Internet]. 2017 [cited 2023 Sep 11];13(11):2606–11. [Accessed 2023 Sep 11] Available at: https://www.ncbi.nlm.nih.gov/pmc/articles/PMC5798425/
- Clinical overview [Internet]. Cdc.gov. 2023 [cited 2023 Sep 11]. [Accessed 2023 Sep 11] Available at: https://www.cdc.gov/shingles/hcp/clinical-overview.html
- Five things you should know about shingles [Internet]. Cdc.gov. 2023 [cited 2023 Sep 11]. [Accessed 2023 Sep 11] Available at: https://www.cdc.gov/shingles/5-things-you-should-know.html
- Lokeshwar MR, Agrawal A, Subbarao SD, Chakraborty MS, Av RP, Weil J, et al. Age related seroprevalence of antibodies to varicella in India. Indian Pediatr [Internet]. 2000 [cited 2023 Sep 11];37(7). [Accessed 2023 Sep 11] Available at: https://pubmed.ncbi.nlm.nih.gov/10906803/
- GSK launches Shingrix in India- A vaccine for the prevention of shingles in adults aged 50 years and above [Internet]. Gsk.com. 2023 [cited 2023 Sep 11]. [Accessed 2023 Sep 11] Available at: https://india-pharma.gsk.com/en-in/media/press-releases/gsk-launches-shingrix-in-india-a-vaccine-for-the-prevention-of-shingles-in-adults-aged-50-years-and-above/
- Signs and symptoms [Internet]. Cdc.gov. 2023 [cited 2023 Sep 11]. [Accessed 2023 Sep 11] Available at: https://www.cdc.gov/shingles/about/symptoms.html
- Prevention and treatment [Internet]. Cdc.gov. 2023 [cited 2023 Sep 11]. [Accessed 2023 Sep 11] Available at: https://cdc.gov/shingles/about/treatment.html
- CDC. Shingles vaccination [Internet]. Centers for Disease Control and Prevention. 2023 [cited 2023 Sep 11]. [Accessed 2023 Sep 11] Available at: https://www.cdc.gov/vaccines/vpd/shingles/public/shingrix/index.html
- Adult immunization schedule – healthcare providers [Internet]. Cdc.gov. 2023 [cited 2023 Sep 11]. [Accessed 2023 Sep 11] Available at: https://www.cdc.gov/vaccines/schedules/hcp/imz/adult.html
Cl code: NP-IN-HZU-WCNT-230018 Dop: Sep 2023
ಹೆಚ್ಚು ಓದಿ
-
Cardiovascular Diseases and Shingles: Understanding Their Connection and Impact
19-03-2025Read more »