ಇದು ವಿಜ್ಞಾನ": ಹೊಸ ಶಿಂಗಲ್ಸ್‌ (ಸರ್ಪಸುತ್ತು) ಜಾಗೃತಿ ಮತ್ತು ತಡೆಗಟ್ಟುವ ಅಭಿಯಾನಕ್ಕಾಗಿ ಅಮಿತಾಬ್ ಬಚ್ಚನ್ ಮತ್ತು ಮನೋಜ್ ಪಹ್ವಾ ಜಿಎಸ್‌ಕೆಯೊಂದಿಗೆ ಕೈಜೋಡಿಸಿದ್ದಾರೆ

sticker banner

ಮುಂಬೈ: ಜಿಎಸ್‌ಕೆ ಇಂದು ಸಿಡುಬು ಮತ್ತು ಶಿಂಗಲ್ಸ್‌ (ಸರ್ಪಸುತ್ತು) ನಡುವಿನ ವೈಜ್ಞಾನಿಕ ಸಂಬಂಧವನ್ನು ವಿವರಿಸಲು ಹಿರಿಯ ನಟರಾದ ಅಮಿತಾಬ್ ಬಚ್ಚನ್ ಮತ್ತು ಮನೋಜ್ ಪಹ್ವಾ ಅವರನ್ನು ಒಳಗೊಂಡ ಶಿಂಗಲ್ಸ್‌ (ಸರ್ಪಸುತ್ತು) ಜಾಗೃತಿಯ ಹೊಸ ಅಭಿಯಾನವನ್ನು ಪ್ರಾರಂಭಿಸಿತು. ಅಭಿಯಾನದ ಚಲನಚಿತ್ರಗಳು ಇಬ್ಬರು ಸ್ನೇಹಿತರ ನಡುವಿನ ದೈನಂದಿನ ಸಂಭಾಷಣೆಗಳನ್ನು ಶಿಂಗಲ್ಸ್‌ (ಸರ್ಪಸುತ್ತು) ಮತ್ತು ಮಧುಮೇಹಿಗಳಲ್ಲಿ ಶಿಂಗಲ್ಸ್‌ನ (ಸರ್ಪಸುತ್ತು)  ಹೆಚ್ಚಿದ ಸಂಭವನೀಯತೆಯ ಬಗ್ಗೆ ಮಾತನಾಡಲು ಬಳಸುತ್ತವೆ.1

 

ಅಭಿಯಾನದ ಬಗ್ಗೆ ಪ್ರತಿಕ್ರಿಯಿಸಿದ ಮನೋಜ್ ಪಹ್ವಾ ಹೇಳಿದರು, "ನಾನು ಶಿಂಗಲ್ಸ್‌ಗೆ (ಸರ್ಪಸುತ್ತು)2  ಗುರಿಯಾಗುವ ವಯಸ್ಸಿನವನಾಗಿದ್ದೇನೆ, ಮತ್ತು ಜಿಎಸ್‌ಕೆಯ ಶಿಂಗಲ್ಸ್‌ (ಸರ್ಪಸುತ್ತು)  ಜಾಗೃತಿ ಅಭಿಯಾನಗಳ ಮೂಲಕ ನಾನು ಈ ನೋವುಭರಿತ ಕಾಯಿಲೆ ಮತ್ತು ಅದಕ್ಕೆ ಸಂಬಂಧಿಸಿದ ಅಪಾಯದ ಅಂಶಗಳ ಬಗ್ಗೆ ಹೆಚ್ಚು ಅರ್ಥಮಾಡಿಕೊಂಡಿದ್ದೇನೆ.3 ನಾನು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದೇನೆ ಮತ್ತು ಸಾಂಕ್ರಾಮಿಕ ರೋಗಗಳಿಂದ ಬಾಧಿತರಾದಾಗ ಸಕ್ರಿಯವಾದ ಮತ್ತು ತೃಪ್ತಿದಾಯಕ ಜೀವನವನ್ನು ನಡೆಸುವುದು ಎಷ್ಟು ಕಷ್ಟ ಎಂದು ನನಗೆ ತಿಳಿದಿದೆ. ಶಿಂಗಲ್ಸ್‌ನ (ಸರ್ಪಸುತ್ತು)  ಕಾರಣ ಮತ್ತು ತಡೆಗಟ್ಟುವಿಕೆಯ ಪ್ರಾಮುಖ್ಯತೆಯ ಬಗ್ಗೆ ಜನರಿಗೆ ಶಿಕ್ಷಣ ನೀಡುವ ಈ ಉಪಕ್ರಮದ ಭಾಗವಾಗಲು ನನಗೆ ಹೆಮ್ಮೆಯೆನಿಸುತ್ತದೆ. 50 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರು ಶಿಂಗಲ್ಸ್‌ನ (ಸರ್ಪಸುತ್ತು) ಮತ್ತು ಅದರ ತಡೆಗಟ್ಟುವಿಕೆಯ ಬಗ್ಗೆ ತಮ್ಮ ವೈದ್ಯರೊಂದಿಗೆ ಮಾತನಾಡುವಂತೆ ನಾನು ಉತ್ತೇಜಿಸುತ್ತೇನೆ.

 

ಒಬ್ಬ ವ್ಯಕ್ತಿಯು ಸಿಡುಬು ಹೊಂದಿದ್ದರೆ ನರಗಳಲ್ಲಿ ಸುಪ್ತವಾಗಿರುವ ರೋಗಾಣು ಮರು-ಸಕ್ರಿಯಗೊಳ್ಳುವುದರಿಂದ ಶಿಂಗಲ್ಸ್‌ (ಸರ್ಪಸುತ್ತು) ಉಂಟಾಗುತ್ತದೆ.4 ಸಿಡುಬು ಇತಿಹಾಸವನ್ನು ಹೊಂದಿದ್ದು ಮಧುಮೇಹವನ್ನು ಹೊಂದಿರುವ ಜನರು ಶಿಂಗಲ್ಸ್‌ (ಸರ್ಪಸುತ್ತು) ಉಂಟಾಗುವ 40% ಹೆಚ್ಚಿನ ಅಪಾಯವನ್ನು ಎದುರಿಸುತ್ತಾರೆ.5 ಅಧಿಕ ರಕ್ತದ ಸಕ್ಕರೆಯ ಮಟ್ಟವು ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸಬಹುದು,6 ಮತ್ತು ಅದು ಸಂಭವಿಸಿದಾಗ ಅದು ಸಿಡುಬಿನ ರೋಗಾಣುವಿನ ಪುನರಾವರ್ತನೆ ಮತ್ತು ಶಿಂಗಲ್ಸ್‌ (ಸರ್ಪಸುತ್ತು) ಮರುಕಳಿಸುವ ಅಪಾಯವನ್ನು ಹೆಚ್ಚಿಸುತ್ತದೆ.7 

ಜಿಎಸ್‌ಕೆಯ ರೋಗಿ ಸಬಲೀಕರಣ ಮುಖ್ಯಸ್ಥ ವಿಗ್ಯೇತಾ ಅಗರ್ವಾಲ್ ಹೇಳಿದರು, "2023 ರ ಎಪಿಐ-ಇಪ್ಸೋಸ್ ಸಮೀಕ್ಷೆಯು ಶಿಂಗಲ್ಸ್‌ (ಸರ್ಪಸುತ್ತು) ಹೊಂದಿರುವವರೂ ಕೂಡ ಈ ನೋವುಭರಿತ ಕಾಯಿಲೆಯ ಕಾರಣವನ್ನು ತಿಳಿದಿರಲಿಲ್ಲ ಎಂದು ತೋರಿಸಿದೆ.8 50 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಜನರು ಶಿಂಗಲ್ಸ್‌ (ಸರ್ಪಸುತ್ತು)ಮತ್ತು ಅದರ ತಡೆಗಟ್ಟುವಿಕೆಯ ಬಗ್ಗೆ ತಿಳಿದುಕೊಳ್ಳುವುದು ಅತ್ಯಗತ್ಯವಾಗಿದೆ. ನಾವು ಶಿಂಗಲ್ಸ್‌ (ಸರ್ಪಸುತ್ತು) ಕಾರಣದ ಹಿಂದಿನ ವಿಜ್ಞಾನ ಮತ್ತು ಸಿಡುಬು ಮತ್ತು ಶಿಂಗಲ್ಸ್‌ (ಸರ್ಪಸುತ್ತು) ನಡುವಿನ ಸಂಬಂಧವನ್ನು ಸರಳ ರೀತಿಯಲ್ಲಿ ವಿವರಿಸಲು ಬಯಸಿದ್ದೇವೆ. ಅಮಿತಾಬ್ ಬಚ್ಚನ್ ಎಲ್ಲಾ ವರ್ಗಗಳ ಜನರೊಂದಿಗೆ ಸಂಪರ್ಕ ಸಾಧಿಸುವ ಸಾಟಿಯಿಲ್ಲದ ಸಾಮರ್ಥ್ಯವನ್ನು ಹೊಂದಿದ್ದಾರೆ. ಅವರನ್ನು ಅಭಿಯಾನದ ಮುಖವಾಗಿ ಹೊಂದಿರುವುದು, ಹೆಚ್ಚಿನ ಜನರನ್ನು, ವಿಶೇಷವಾಗಿ ವಯಸ್ಸಾದ ಹಿರಿಯರನ್ನು ತಲುಪಲು ಮತ್ತು ಪ್ರೋತ್ಸಾಹಿಸಲು ಸಹಾಯ ಮಾಡುತ್ತದೆ ಮತ್ತು ಶಿಂಗಲ್ಸ್‌ (ಸರ್ಪಸುತ್ತು) ಮತ್ತು ಅದರ ತಡೆಗಟ್ಟುವಿಕೆಯ ಬಗ್ಗೆ ತಮ್ಮ ವೈದ್ಯರೊಂದಿಗೆ ಮಾತನಾಡಲು ನಮಗೆ ಸಹಾಯ ಮಾಡುತ್ತದೆ ಎಂದು ನಮಗೆ ವಿಶ್ವಾಸವಿದೆ.”

 

ದಿ ಸ್ಮಾಲ್ ಬಿಗ್ ಐಡಿಯಾ ನೆಟ್‌ವರ್ಕ್‌ನ ಅಂಗಸಂಸ್ಥೆಯಾದ ಬ್ಲಿಟ್ಜ್ ಕ್ರೈಗ್‌ನ ಸಹ-ಸಂಸ್ಥಾಪಕರು ಮತ್ತು ಸಿಇಒ ಆದ ಹರಿಕೃಷ್ಣನ್ ಪಿಳ್ಳೈ, ಹೇಳಿದರು "ಈ ಅಭಿಯಾನವು ಎರಡು ಪ್ರಚಾರ ಚಲನಚಿತ್ರಗಳನ್ನು ಒಳಗೊಂಡಿದೆ. ಒಂದು ಚಲನಚಿತ್ರವು ಇಬ್ಬರು ವಯಸ್ಸಾದ ಸ್ನೇಹಿತರು ಶಾಲಾ ದಿನಗಳನ್ನು ನೆನಪಿಸಿಕೊಳ್ಳುವುದನ್ನು ತೋರಿಸುತ್ತದೆ ಮತ್ತು ಸಿಡುಬು ಮತ್ತು ಶಿಂಗಲ್ಸ್‌ನ (ಸರ್ಪಸುತ್ತು) ನಡುವಿನ ಸಂಬಂಧವನ್ನು ಸ್ಥಾಪಿಸುತ್ತದೆ, ಇನ್ನೊಂದು ಇಬ್ಬರು ಸ್ನೇಹಿತರ ನಡುವಿನ ಕಾಳಜಿಯ ಬಂಧವನ್ನು ಚಿತ್ರಿಸುತ್ತದೆ ಮತ್ತು ಮಧುಮೇಹ ಹೊಂದಿರುವ ಜನರು ಶಿಂಗಲ್ಸ್‌ಗೆ (ಸರ್ಪಸುತ್ತು) ಒಳಗಾಗುವ ಹೆಚ್ಚಿನ ದೌರ್ಬಲ್ಯವನ್ನು ಹೊಂದಿರುವುದರ ಮೇಲೆ ಕೇಂದ್ರೀಕರಿಸುತ್ತದೆ. 'ಇದು ವಿಜ್ಞಾನ' ಅಭಿಯಾನವು 50 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರನ್ನು ಶಿಂಗಲ್ಸ್‌ (ಸರ್ಪಸುತ್ತು) ಮತ್ತು ಅದರ ತಡೆಗಟ್ಟುವಿಕೆಯ ಬಗ್ಗೆ ತಮ್ಮ ವೈದ್ಯರೊಂದಿಗೆ ಮಾತನಾಡುವಂತೆ ಒತ್ತಾಯಿಸುತ್ತದೆ. ಇಲ್ಲಿ ಕಾಣುವ ಸಂದೇಶಗಳು ಸ್ಪಷ್ಟ ಮತ್ತು ಸ್ಮರಣೀಯವಾಗಿವೆ.” 

 

ಚಿತ್ರದ ಸೃಜನಶೀಲ ಒಳನೋಟದ ಬಗ್ಗೆ ಪ್ರತಿಕ್ರಿಯಿಸಿದ ನಿರ್ದೇಶಕರಾದ ಆರ್.ಬಾಲ್ಕಿ, "ಶಿಂಗಲ್ಸ್‌ (ಸರ್ಪಸುತ್ತು) ಒಂದು ರೋಗವಾಗಿದ್ದು, ಇದನ್ನು ಅನೇಕ ಜನರು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ಶಿಂಗಲ್ಸ್‌ (ಸರ್ಪಸುತ್ತು) ಮತ್ತು ಸಿಡುಬಿನ ನಡುವಿನ ಸಂಬಂಧದ ಬಗ್ಗೆ ಸುಲಭವಾಗಿ ಅರ್ಥಮಾಡಿಕೊಳ್ಳುವಂತೆ ಮತ್ತು ಆಕರ್ಷಕವಾಗಿ ಮಾತನಾಡುವುದು ಒಂದು ಸವಾಲಾಗಿತ್ತು. ದಿ ಸ್ಮಾಲ್ ಬಿಗ್ ಐಡಿಯಾ ಸರಳ ಮತ್ತು ಬಲವಾದ ಸಂದೇಶವನ್ನು ರಚಿಸಿದ್ದು ನನಗೆ ಬಹಳವೇ ಇಷ್ಟವಾಯಿತು. ಈ ಸಂದರ್ಭದಲ್ಲಿ, ಸೃಜನಶೀಲತೆಯಲ್ಲದೇ, ಸ್ಪಷ್ಟತೆಯು ಆಗಿನ ಅಗತ್ಯವಾಗಿತ್ತು.”

 

ಯೂಟ್ಯೂಬ್ (ಮೊಬೈಲ್ ಮತ್ತು ಸಂಪರ್ಕಿತ ಟಿವಿ), ಗೂಗಲ್ ಡಿಸ್ಪ್ಲೇ, ಮೆಟಾ, ಆಯ್ದ ಒಟಿಟಿ ವೇದಿಕೆಗಳು, ಪೇಟಿಎಂ, ಗೂಗಲ್ ಪೇ ಮತ್ತು ಸಾಮಾನ್ಯ ಮನರಂಜನಾ ಚಾನೆಲ್‌ಗಳು (ಜಿಇಸಿ), ಚಲನಚಿತ್ರಗಳು ಮತ್ತು ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳ ಸುದ್ದಿಗಳಂತಹ ವಿವಿಧ ಟಿವಿ ಚಾನೆಲ್‌ಗಳೂ ಸೇರಿದಂತೆ ಅನೇಕ ವೇದಿಕೆಗಳಲ್ಲಿಈ  ಅಭಿಯಾನದ ಚಲನಚಿತ್ರಗಳು ಬಿಡುಗಡೆಯಾಗಲಿವೆ. ಹೆಚ್ಚುವರಿಯಾಗಿ, ಈ ಅಭಿಯಾನಕ್ಕಾಗಿ ಜನಪ್ರಿಯ ದೂರದರ್ಶನ ರಸಪ್ರಶ್ನೆ ಕಾರ್ಯಕ್ರಮ ಕೌನ್ ಬನೇಗಾ ಕರೋಡ್‌ಪತಿ (ಕೆಬಿಸಿ) ಜೊತೆಗೂ ಸಹಭಾಗಿತ್ವವನ್ನು ಸ್ಥಾಪಿಸಲಾಗಿದೆ.

  • ಜಿಎಸ್‌ಕೆಯ ಹೊಸ ಅಭಿಯಾನವು 7 ಮುಖ್ಯವಾದ ಲಸಿಕೆಗಳೊಂದಿಗೆ ತಮ್ಮ ಮಕ್ಕಳ ಭವಿಷ್ಯವನ್ನು ಬೆಂಬಲಿಸುವಂತೆ ಪೋಷಕರನ್ನು ಕೇಳುತ್ತದೆ

    25-07-2024
    6 min read
    Read more »