ಜಿಎಸ್‌ಕೆಯ ಹೊಸ ಅಭಿಯಾನವು 7 ಮುಖ್ಯವಾದ ಲಸಿಕೆಗಳೊಂದಿಗೆ ತಮ್ಮ ಮಕ್ಕಳ ಭವಿಷ್ಯವನ್ನು ಬೆಂಬಲಿಸುವಂತೆ ಪೋಷಕರನ್ನು ಕೇಳುತ್ತದೆ

sticker banner

ಮುಂಬೈ: ಜಿಎಸ್‌ಕೆ ಇಂದು ತನ್ನ ಹೊಸ ಬಹುಚಾನಲ್ ಅಭಿಯಾನವಾದ 'ಅಬ್ ಇಂಡಿಯಾ ಬನೇಗಾ 7-ಸ್ಟಾರ್' ಅನ್ನು ಪ್ರಾರಂಭಿಸುವುದಾಗಿ ಘೋಷಿಸಿತು. ಭಾರತದ ಭವಿಷ್ಯವು ಪೋಷಕರ ಕೈಯಲ್ಲಿದೆ ಎಂದು ಈ ಅಭಿಯಾನವು ಅವರಿಗೆ ತೋರಿಸುತ್ತದೆ. ಸಿಡುಬು, ಹೆಪಟೈಟಿಸ್ ಎ, ಹೆಪಟೈಟಿಸ್ ಬಿ, ಮೆನಿಂಜೈಟಿಸ್, ದಡಾರ, ಮಂಪ್ಸ್, ರುಬೆಲ್ಲಾ, ನ್ಯುಮೋನಿಯಾ, ಇನ್‌ಫ್ಲ್ಯುಯೆಂಜಾ, ಡಿಫ್ತೀರಿಯಾ, ಧನುರ್ವಾಯು, ನಾಯಿಕೆಮ್ಮು, ಎಚ್ಐಬಿ ಸೋಂಕು ಮತ್ತು ಪೋಲಿಯೊ ಸೇರಿದಂತೆ 14 ರೋಗಗಳ** ವಿರುದ್ಧ 7 ಅಗತ್ಯ ಲಸಿಕೆಗಳೊಂದಿಗೆ* ತಮ್ಮ ಮಕ್ಕಳ ಭವಿಷ್ಯವನ್ನು ಭದ್ರಪಡಿಸಿಕೊಳ್ಳುವಂತೆ ಇದು ಅವರನ್ನು ಉತ್ತೇಜಿಸುತ್ತದೆ.

 

ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ (ಐಎಪಿ) 1 ರಿಂದ 2 ವರ್ಷ ವಯಸ್ಸಿನ ಮಕ್ಕಳಿಗೆ 7 ಲಸಿಕೆಗಳನ್ನು ಶಿಫಾರಸು ಮಾಡುತ್ತದೆ: ಸಿಡುಬು ಮತ್ತು ಹೆಪಟೈಟಿಸ್ ಎ ಯ ಎರಡು ಡೋಸ್‌, ಮೆನಿಂಜೈಟಿಸ್# ಮತ್ತು ಎಂಎಂಆರ್‌ನ ಎರಡನೇ ಡೋಸ್, ಪಿಸಿವಿ ಮತ್ತು ಡಿಟಿಪಿ ಹಿಬ್ ಐಪಿವಿಯ ಬೂಸ್ಟರ್ ಡೋಸ್ ಮತ್ತು ಫ್ಲೂ ನ ವಾರ್ಷಿಕ ಡೋಸ್1. ಭಾರತದಲ್ಲಿ ಮೊದಲ ವರ್ಷದಲ್ಲಿ ರೋಗನಿರೋಧಕತೆಗೆ ನೀಡುವ ರಕ್ಷಣೆ ಹೆಚ್ಚಿದ್ದರೂ, ಹುಟ್ಟಿದ ಮೊದಲ ವರ್ಷದ ನಂತರ ಕೈಬಿಡುವ ಪ್ರಮಾಣ ಹೆಚ್ಚಾಗಿದೆ. ಆದ್ದರಿಂದ, ದೇಶದಲ್ಲಿ ಗಮನಾರ್ಹ ಸಂಖ್ಯೆಯ ಮಕ್ಕಳು ಕೇವಲ ಭಾಗಶಃ ಲಸಿಕೆಯನ್ನಷ್ಟೇ ಪಡೆಯುತ್ತಾರೆ2.

 

ಜಿಎಸ್‌ಕೆಯ ವೈದ್ಯಕೀಯ ನಿರ್ದೇಶಕಿಯಾದ ಡಾ.ಶಾಲಿನಿ ಮೆನನ್ ಮಾತನಾಡಿ ಹೇಳಿದರು, "ಮಗು ಹುಟ್ಟಿದ ಮೊದಲ ವರ್ಷದ ನಂತರ, ಲಸಿಕೆಯ ಮೂಲಕ-ತಡೆಗಟ್ಟಬಹುದಾದ ಗಂಭೀರ ರೋಗಗಳ ವಿರುದ್ಧ ದೃಢವಾದ ರೋಗನಿರೋಧಕ ಶಕ್ತಿಯನ್ನು ನಿರ್ಮಿಸುವುದು ಮುಖ್ಯವಾಗಿದೆ. ಲಸಿಕೆಯಿಂದ ಪಡೆಯುವ ರೋಗನಿರೋಧಕ ಶಕ್ತಿಯು ಸಮುದಾಯಕ್ಕೆ ವಿಸ್ತರಿಸಿ ರೋಗ ಹರಡುವುದನ್ನು ತಡೆಯಬಹುದು ಮತ್ತು ಅದು ಪ್ರತಿಜೀವಕಗಳ ಅಗತ್ಯವನ್ನು ಕಡಿಮೆ ಮಾಡುವ ಮೂಲಕ ರೋಗಾಣು ನಿರೋಧಕ ಪ್ರತಿರೋಧವನ್ನು ಹೆಚ್ಚಿಸುವ ಬೆದರಿಕೆಯನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಈ ವಯಸ್ಸಿನಲ್ಲಿ ನೀಡಲಾಗುವ 7 ಅಗತ್ಯ ಲಸಿಕೆಗಳು ಅವರನ್ನು 14 ಅಪಾಯಕಾರಿ ರೋಗಗಳಿಂದ ರಕ್ಷಿಸುತ್ತವೆ ಮತ್ತು ಅವರು ಆರೋಗ್ಯಕರ ವಯಸ್ಕರಾಗಿ ಬೆಳೆಯಲು ಸಹಾಯ ಮಾಡುತ್ತದೆ. ಈ ಅಭಿಯಾನದ ಮೂಲಕ, 1 ರಿಂದ 2 ವರ್ಷಗಳಲ್ಲಿ ಅವರ ಮಕ್ಕಳಿಗೆ ಶಿಫಾರಸು ಮಾಡಿದ ಲಸಿಕೆಗಳನ್ನು ನೀಡುವ ಅಗತ್ಯವನ್ನು ಪೋಷಕರಿಗೆ ಒತ್ತಿಹೇಳಲು ನಾವು ಬಯಸುತ್ತೇವೆ.”

$_.altText

ಅಭಿಯಾನದ ಚಿತ್ರಗಳ ಮುಖ್ಯವಾಗಿ ಗಮನ ನೀಡುವುದು 7 ಲಸಿಕೆಗಳ ನಿರ್ಣಾಯಕ ಅಗತ್ಯದ ಮೇಲಾಗಿದೆ. ಎರಡು ಪ್ರಚಾರ ಚಲನಚಿತ್ರಗಳು ಕ್ರಿಕೆಟಿಗರು ಮತ್ತು ಬಾಹ್ಯಾಕಾಶ ನಿಲ್ದಾಣ ಮಿಷನ್ ನಿರ್ದೇಶಕರಂತಹ ವಿವಿಧ ಕ್ಷೇತ್ರಗಳಲ್ಲಿನ ವೃತ್ತಿಪರರು ಮಗುವು 7 ಅಗತ್ಯ ಲಸಿಕೆಗಳನ್ನು ಪಡೆದಿದೆಯೇ ಎಂದು ಪರಿಶೀಲಿಸಲು ತಮ್ಮ ಪ್ರಮುಖ ಕೆಲಸಗಳನ್ನು ನಿಲ್ಲಿಸುವುದನ್ನು ತೋರಿಸುತ್ತವೆ. ಭಾರತದ ಭವಿಷ್ಯದ 'ತಾರೆಗಳ' ಪೋಷಕರಿಗೆ ಶಕ್ತಿಯುತ ಸಂದೇಶವನ್ನು ನೀಡುವ ಭಾರತದ ಪ್ರಸ್ತುತ 'ತಾರೆಯರನ್ನು' ಚಲನಚಿತ್ರಗಳಲ್ಲಿ ಸೆರೆಹಿಡಿಯಲಾಗಿದೆ. ಮಗುವಿನ ಭವಿಷ್ಯವನ್ನು ಭದ್ರಪಡಿಸುವುದು ಇತರ ಯಾವುದೇ ಕೆಲಸಕ್ಕಿಂತ ಹೆಚ್ಚು ಮುಖ್ಯವಾಗಿದೆ ಮತ್ತು ಈ ಭವಿಷ್ಯವು 7 ಲಸಿಕೆಗಳು ನೀಡುವ 7-ಸ್ಟಾರ್ ರಕ್ಷಣೆಯನ್ನು ಅವಲಂಬಿಸಿದೆ ಎಂಬ ಸಂದೇಶವನ್ನು ಚಲನಚಿತ್ರಗಳು ಪರಿಣಾಮಕಾರಿಯಾಗಿ ತಿಳಿಸುತ್ತವೆ.

 

ಈ ಅಭಿಯಾನವು ಟಿವಿ, ಡಿಜಿಟಲ್, ಸಾಮಾಜಿಕ ಮಾಧ್ಯಮ, ರೇಡಿಯೋ, ಸಿಟಿವಿ (ಸಂಪರ್ಕಿತ ಟಿವಿ) ಮತ್ತು ಒಟಿಟಿಯಂತಹ ಅನೇಕ ಮಾಧ್ಯಮ ವೇದಿಕೆಗಳಲ್ಲಿ ಪ್ರಸಾರವಾಗಲಿದೆ. ಪೋಷಕರು ತಮ್ಮ ಮಕ್ಕಳ ಲಸಿಕಾಕರಣ ವೇಳಾಪಟ್ಟಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ತಮ್ಮ ಮಕ್ಕಳ ತಜ್ಞರನ್ನು ಸಂಪರ್ಕಿಸಬೇಕು ಮತ್ತು MyVaccinationHub.in ನಂಥ ಧೃಢೀಕೃತ ಮೂಲಗಳನ್ನು ಸಂಪರ್ಕಿಸಬೇಕು

References

  1. Indian Academy of Pediatrics (IAP) Advisory Committee on Vaccines and Immunization Practices (ACVIP): Recommended Immunization Schedule (2023) and Update on Immunization for Children Aged 0  Through 18 Years.
  2. Exploring the Pattern of Immunization Dropout among Children in India: A District-Level Comparative Analysis

 

Cl code: NP-IN-PVU-WCNT-250007 Dop: March 2025

ಮತ್ತಷ್ಟು ಓದಿ

  • ಇದು ವಿಜ್ಞಾನ": ಹೊಸ ಶಿಂಗಲ್ಸ್‌ (ಸರ್ಪಸುತ್ತು) ಜಾಗೃತಿ ಮತ್ತು ತಡೆಗಟ್ಟುವ ಅಭಿಯಾನಕ್ಕಾಗಿ ಅಮಿತಾಬ್ ಬಚ್ಚನ್ ಮತ್ತು ಮನೋಜ್ ಪಹ್ವಾ ಜಿಎಸ್‌ಕೆಯೊಂದಿಗೆ ಕೈಜೋಡಿಸಿದ್ದಾರೆ

    12-08-2024
    ~ai-2385dcf1-fecc-4eaf-a613-a9ad93fa5a11_
    6 min read
    Read more »